ಗರ್ಭೋಪನಿಷತ್
ಗರ್ಭೋಪನಿಷತ್ ಪರಿಚಯಾತ್ಮಕ ಲೇಖನ ಪ್ರಸ್ತುತ ಸಮಯದಲ್ಲಿ ಉಪನಿಷತ್ತುಗಳು ಅತ್ಯಂತ ಜನಪ್ರಿಯ ಹಾಗೂ ವೇದಗಳ ಮೆಚ್ಚುಗೆಯ ಭಾಗ. ಉಪನಿಷತ್ತುಗಳು ಜ್ಞಾನಕಾಂಡದ ಭಂಡಾರ. ಸಮಸ್ತ ಮಹಾವಾಕ್ಯಗಳೂ ಇವುಗಳಲ್ಲಿವೆ. ಮುಖ್ಯವಾಗಿ ಉಪನಿಷತ್ತುಗಳು ತತ್ತ್ವಶಾಸ್ತ್ರವನ್ನು ಪ್ರತಿಪಾದಿಸುತ್ತವೆ. ಅಲ್ಲದೇ ಉಪನಿಷತ್ತುಗಳಲ್ಲಿ ಕೆಲವು ಕಡೆ ವೈಜ್ಞಾನಿಕ ತತ್ತ್ವಗಳೂ ಅಡಗಿರುವುದು. 108 ಉಪನಿಷತ್ತುಗಳೂ ನಾಲ್ಕು ವೇದಗಳಲ್ಲಿ ಕಂಡುಬರುವುದು. ಅವುಗಳಲ್ಲಿ - ಸಾಮವೇದದಲ್ಲಿ - 16 ಶುಕ್ಲಯಜುರ್ವೇದದಲ್ಲಿ - 29 ಋಗ್ವೇದದಲ್ಲಿ - 10 ಅಥರ್ವವೇದದಲ್ಲಿ - 21 ಕೃಷ್ಣ ಯಜುರ್ವೇದದಲ್ಲಿ - 32 ಇವುಗಳಲ್ಲಿ ಗರ್ಭೋಪನಿಷತ್ ಸಹ ಒಂದು. ಇದು ಕೃಷ್ಣ ಯಜುರ್ವೇದದಲ್ಲಿ ಬರುವುದು. ಇದು ಅತಿ ಕಿರಿದಾದ ಉಪನಿಷತ್ತು ಹಾಗೂ ಇದರಲ್ಲಿ ಮುಖ್ಯವಾಗಿ ನಾಲ್ಕು ಶ್ಲೋಕಗಳಿದ್ದು ಅದರೊಂದಿಗೆ ಒಂಬತ್ತು ವಿವರಣಾತ್ಮಕ ಶ್ಲೋಕಗಳಿರುವುದು. ಈ ಉಪನಿಷತ್ತಿನ ಸಂಪೂರ್ಣ ಪಾಠವು (ಕನ್ನಡದಲ್ಲಿ) https://sanskritdocuments.org/doc_upanishhat/garbha.html?lang=kn ನಲ್ಲಿ ನೋಡಬಹುದು. ಗರ್ಭೋಪನಿಷತ್ತಿನಲ್ಲಿ ಗರ್ಭದ ವಿಷಯವಾಗಿ ವಿಸ್ತಾರವಾದ ವೈಜ್ಞಾನಿಕ ವಿವರಣೆ ಇರುವುದು. ಈ ವಿಷಯಗಳನ್ನು ಎಲ್ಲರೂ ಅರಿಯಲೇ ಬೇಕು. ಅವುಗಳ ಬಗ್ಗೆ ಸಂಕ್ಷೇಪವಾಗಿ ಪ್ರಸ್ತುತಿ ಪಡಿಸಲು ಬಯಸುವೆ. ಮೊದಲಿಗೆ ಈ ಉಪನಿಷತ್ತಿನಲ್ಲಿ ಗರ್ಭೋತ್ಪತ್ತಿ, ಅದರ ಬೆಳವಣಿಗೆಯ ವಿಚಾರವನ್ನು ಅತ್ಯಂತ ಸೂಕ್ಷ್ಮವಾಗಿ ವಿವರಿಸಲ...