ಉಮಾಸಹಸ್ರಮ್ ನಾಲ್ಕನೇ ಶತಕ
ಉಮಾಸಹಸ್ರಮ್ ಚತುರ್ಥ ಶತಕಂ ಪುಷ್ಪಗುಚ್ಛ ( ಸ್ತಬಕ ) – 13; ಛಂದಸ್ಸು - ಉಪಜಾತಿವೃತ್ತ ( ತ್ರಿಷ್ಟುಬ್ ವಿಶೇಷ ವೃತ್ತ ) ಕಟಾಕ್ಷ ವರ್ಣನೆ ಸಂಸ್ಕೃತದಲ್ಲಿ : ಭವಾಂಬುಧಿಂ ತಾರಯತಾದ್ಭವಂತಂ ಹಾಸೋ s ದ್ಭುತಃ ಕುಂಜರವಕ್ತ್ರಮಾತುಃ ಯೋ ಹಂತಿ ಬಿಂಬಾಧರಲಂಘನೇ s ಪಿ ವ್ಯಕ್ತಾಲಸತ್ವೋ ಹರಿತಾಂ ತಮಾಂಸಿ ||1|| ತಾತ್ಪರ್ಯ : ಗಣೇಶನ ಮಾತೆಯ ಮನೋಹರವಾದ ಮಂದಹಾಸವು ನಿಮ್ಮನ್ನು ಪ್ರಾಪಂಚಿಕ ಆಸ್ತಿತ್ವಗಳ ಸಾಗರವನ್ನು ದಾಟಲು ಸಹಾಯ ಮಾಡಲಿ . ಈ ಸೌಮ್ಯವಾದ ಮಂದಹಾಸವು ಕೇವಲ ಮಾತೆಯ ತುಟಿಗಳ ಬಿಂಬವನ್ನು ದಾಟಿದರೂ , ಅದು ಎಲ್ಲ ದಿಕ್ಕುಗಳಲ್ಲಿ ಪಸರಿಸಿರುವ ದಟ್ಟವಾದ ಕತ್ತಲನ್ನು ಚದುರಿಸುವ ಶಕ್ತಿಯನ್ನು ಹೊಂದಿದೆ . ವಿವರಣೆ : ದೇವಿಯ ಕೆಂದುಟಿಗಳನ್ನು ಅತಿಕ್ರಮಿಸಿದ್ದರೂ ಮಂದವಾಗಿಯೇ ಇರುವ ದೇವಿಯ ಮಂದಹಾಸವು ದಿಕ್ಕುಗಳಲ್ಲಿರುವ ಕತ್ತಲನ್ನು ನಾಶಪಡಿಸುತ್ತದೆ . ಅಂತಹ ಗಜಾನನನ ತಾಯಿಯಾದ ಆ ದೇವಿಯ ಮಂದಹಾಸವು , ನಿನ್ನನ್ನು ಸಂಸಾರಸಾಗರದಿಂದ ಪಾರುಮಾಡಲಿ . ಸಂಸ್ಕೃತದಲ್ಲಿ : ಸಕ್ತಃ ಸದಾ ಚಂದ್ರಕಲಾಕಲಾಪೇ ಸರ್ವೇಷು ಭೂತೇಷು ದಯಾಂ ದಧಾನಃ ಗೌರೀಕಟಾಕ್ಷೋ ರಮಣೋ ಮುನಿರ್ವಾ ಮದೀಯಮಜ್ಞಾನಮಪಾಕರೋತು ||2|| ತಾತ್ಪರ್ಯ : ದೇವಿಯ ಹಾಗೂ ರಮಣ ಮಹರ್ಷಿಗ...