Posts

ಉಮಾಸಹಸ್ರಂ ಪಂಚಮ ಶತಕ

ಉಮಾಸಹಸ್ರಂ ಪಂಚಮ  ಶತಕ ಪಂಚಮ ಶತಕ ಪುಷ್ಪಗುಚ್ಛ ( ಸ್ತಬಕ ) - 17 ಛಂದಸ್ಸು - ಚಂಪಕಮಾಲಾವೃತ್ತ ಶಕ್ತಿಯ ಆರಾಧನೆ ಹಾಗೂ ಪೂಜಿಸುವುದು ಸಂಸ್ಕೃತದಲ್ಲಿ : ಪಾಪವಿಧೂತೌ ನಿರ್ಮಲಗಂಗಾ ತಾಪನಿರಾಸೇ ಚಂದ್ರಮರೀಚಿಃ ಭರ್ಗಪುರಂಧ್ರೀಹಾಸಕಲಾ ಮೇ ಭದ್ರಮಮಿಶ್ರಂ ಕಾ s ಪಿ ಕರೋತು ||1|| ತಾತ್ಪರ್ಯ : ಭರ್ಗ - ಶಂಕರ ಭಗವಾನನ ಪತ್ನಿಯ ಪ್ರಕಾಶಿಸುವ ಮಂದಹಾಸವು ಎಲ್ಲ ಪಾವಿತ್ರ್ಯತೆಯಿಂದೊಡಗೂಡಿ ನನ್ನನ್ನು ಆಶೀರ್ವದಿಸಲಿ ; ಈ ಮಂದಹಾಸವು ಪಾಪವನ್ನು ತೊಳೆಯುವಾಗ ಪವಿತ್ರವಾದ ಗಂಗೆಯಂತೆ ವರ್ತಿಸಿ , ಶಾಖವನ್ನು ಪರಿಹಾರಮಾಡುವಾಗ ಅದು ಚಂದ್ರನ ತಂಪಾದ ಕಿರಣಗಳಂತೆ ವರ್ತಿಸುವುದು . ವಿವರಣೆ : ನನ್ನ ಪಾಪಗಳನ್ನು ಹೋಗಲಾಡಿಸುವುದರಲ್ಲಿ ಪರಾಮಪಾವನೆಯಾದ ಗಂಗೆಯಂತಿರುವ , ನನ್ನ ದುಃಖಗಳ ಬೇಗೆಯನ್ನು ಪರಿಹರಿಸುವುದರಲ್ಲಿ ಬೆಳದಿಂಗಳಂತಿರುವ ಪರಶಿವನ ಮಡದಿಯ ಮಂದಹಾಸದ ಅಂಶವು ನನಗೆ ಶುದ್ಧವಾದ ಮಂಗಳವನ್ನುಂಟು ಮಾಡಲಿ . ಸಂಸ್ಕೃತದಲ್ಲಿ : ಶಿಷ್ಟಕುಲಾನಾಂ ಸಮ್ಮದಯಿತ್ರೀ ದುಷ್ಟಜನಾನಾಂ ಸಂಶಮಯಿತ್ರೀ ಕಷ್ಟಮಪಾರಂ ಪಾದಜುಷೋ ಮೇ ವಿಷ್ಟಪರಾಜ್ಞೀ ಸಾ ವಿಧುನೋತು ||2|| ತಾತ್ಪರ್ಯ : ವಿಶ್ವದ ಸಾಮ್ರಾಜ್ಞಿಯು ನನ್ನ ಕಷ್ಟಗಳನ್ನು ದೂರಮಾಡಲಿ ; ಸಜ್ಜನರ ಹೃದಯವನ್ನು ಸಂತೋಷಪಡಿಸುವ ಮತ್ತು ದುಷ್ಟರನ್ನು ಶಿಕ್ಷಿಸುವ ದೇವಿಯ ಪಾದಗಳನ್ನು ಸೇವಿಸುವೆ . ವಿವರಣೆ : ದೇವಿಯು ಸಜ್ಜನರ ವಂಶಗಳನ್ನು ಅನಂದಪಡ...